ಪತ್ತೇದಾರಿ ಡ್ರಾಮಾ ಹಿನ್ನೆಲೆಯಲ್ಲಿ ತಯಾರಾಗುತ್ತಿರುವ ‘ಸೀಕ್ರೆಟ್ ಸೋಲ್ಜರ್’ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಅಕ್ಕಿ ವಿಶ್ವನಾಥ್ ರೆಡ್ಡಿ ನಿರ್ದೇಶನದ ಈ ಸಿನಿಮಾದಲ್ಲಿ ನಿಹಾಲ್ ಕೊಡತಿ ಮತ್ತು ಸೂರ್ಯ ಶ್ರೀನಿವಾಸ್ ನಾಯಕರಾಗಿ ನಟಿಸಿದ್ದಾರೆ.
ಮೂನ್ ಲೈಟ್ ಎಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಕಮಲ್ ಕಾಮರಾಜು, ರಘುಬಾಬು, ರಂಗಸ್ಥಳಂ ಮಹೇಶ್, ಶ್ರೀನಿವಾಸ್ ವರ್ಲಮಣಿ, ಶ್ರೀಕಾಂತ್ ಅಯ್ಯಂಗಾರ್ ಮುಂತಾದವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಈಗಾಗಲೇ ಈ ಸಿನಿಮಾದಿಂದ ಬಿಡುಗಡೆಯಾಗಿರುವ ಹಾಡುಗಳು, ಟೀಸರ್, ಟ್ರೇಲರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿದೆ. ಇತ್ತೀಚೆಗಷ್ಟೇ ‘ಓಯ್ ಓಯ್..’ ಎಂಬ ಹೊಸ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಈ ಹಾಡಿಗೆ ಕಾರ್ತಿಕ್ ರೋಡ್ರಿಗಸ್ ಸಂಗೀತ ಸಂಯೋಜಿಸಿದ್ದು, ರೆಹಮಾನ್ ಸಾಹಿತ್ಯ ಬರೆದಿದ್ದಾರೆ. ಕಾರ್ತಿಕ್ ಅವರೇ ಹಾಡನ್ನು ಹಾಡಿದ್ದಾರೆ.ಸ್ಪೈ ಡ್ರಾಮಾ ಆಧಾರಿತ ಈ ಚಿತ್ರ ಸೆಪ್ಟೆಂಬರ್ 18 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.