ಅಂತರಾಷ್ಟ್ರೀಯ ಮಟ್ಟದಲ್ಲಿ ತಯಾರಾಗುತ್ತಿರುವ ಮಹೇಶ್ ಬಾಬು-ರಾಜಮೌಳಿ ಪ್ರಾಜೆಕ್ಟ್ 'ವಾರಣಾಸಿ' ಮೇಲೆ ನಿರೀಕ್ಷೆ ಹೆಚ್ಚಿದೆ. ಸಾಮಾನ್ಯ ಸಾಹಸ ಚಿತ್ರಗಳಿಗಿಂತ ಭಿನ್ನವಾಗಿ, ರಾಜಮೌಳಿ ದೃಶ್ಯಗಳು ಮತ್ತು ವಿಶ್ವ ನಿರ್ಮಾಣದತ್ತ ಗಮನ ಹರಿಸಿದ್ದಾರೆ. ಇದರ ಅಂಗವಾಗಿ ಕಥೆಯ ಹಿನ್ನೆಲೆಗೆ ತಕ್ಕಂತೆ ವಿಶೇಷವಾದ ಭಾಷೆ, ಚಿತ್ರಕಥೆ ರೂಪಿಸಲಾಗಿದೆ ಎಂಬ ಸುದ್ದಿ ಚಿತ್ರ ವಲಯದಲ್ಲಿ ತೀವ್ರ ಕುತೂಹಲ ಮೂಡಿಸುತ್ತಿದೆ.