ರಾಜ್ಯದ ಜನರಿಗೆ ಉತ್ತಮ ಪೌಷ್ಠಿಕಾಂಶ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲು ಹೊಸ ಕೇಂದ್ರಗಳನ್ನು ಲಭ್ಯಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ಹೇಳಿದರು.
21 ಹೊಸ ಪೌಷ್ಟಿಕಾಂಶ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ. ಇವುಗಳ ಮೂಲಕ ಇನ್ನೂ 175 ಹಾಸಿಗೆಗಳು ಲಭ್ಯವಾಗಲಿವೆ ಎಂದು ಹೇಳಿದರು.
ಪ್ರಸ್ತುತ ರಾಜ್ಯದಲ್ಲಿ 21 ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, 340 ಹಾಸಿಗೆಗಳು ಲಭ್ಯವಿವೆ ಎಂದು ಸಚಿವರು ತಿಳಿಸಿದರು. ಹೊಸ ಕೇಂದ್ರಗಳ ಸ್ಥಾಪನೆಯೊಂದಿಗೆ, ಸೇವೆಗಳ ವ್ಯಾಪ್ತಿಯು ಮತ್ತಷ್ಟು ವಿಸ್ತರಿಸುತ್ತದೆ.