ಭಾರತ ಕ್ರಿಕೆಟ್ ತಂಡದೊಂದಿಗೆ ಐತಿಹಾಸಿಕ ಟಿ20 ಪಂದ್ಯಕ್ಕೆ ಜಪಾನ್ ಸಜ್ಜಾಗಿದೆ. ಭಾರತದೊಂದಿಗೆ ವಿಶೇಷ ಹೋರಾಟಕ್ಕೆ ಜಪಾನ್ ತನ್ನ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದೆ.
ಜಪಾನ್ ಕ್ರಿಕೆಟ್ ನಲ್ಲಿ ಪ್ರತಿಭಾವಂತ ಯುವ ಆಟಗಾರರಿಗೆ ಅವಕಾಶ ನೀಡುವ ಜತೆಗೆ ದೇಶದಲ್ಲಿ ಕ್ರಿಕೆಟ್ ವಿಸ್ತರಿಸುವ ಉದ್ದೇಶದಿಂದ ಈ ತಂಡವನ್ನು ಆಯ್ಕೆ ಮಾಡಲಾಗಿದೆಯಂತೆ. ಕೆಂಡಾಲ್ ಕಡೋವಾಕಿ-ಫ್ಲೆಮಿಂಗ್ ಮತ್ತು ಡೆಕ್ಲಾನ್ ಸುಜುಕಿ-ಮೆಕ್‌ಕಾಂಬ್ ಅವರಂತಹ ಅನುಭವಿ ಆಟಗಾರರು ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮಿಯಾಚಿ ಮತ್ತು ಮಕೊಟೊ ತನಿಯಾಮಾ ಅವರಂತಹ ಆಟಗಾರರು ಸಹ ಜಪಾನ್‌ನ ತಂಡದಲ್ಲಿದ್ದಾರೆ. ಅದರಲ್ಲೂ ಶೇನ್ ವಾರ್ನ್ ಅವರ ಬೌಲಿಂಗ್ ವೀಡಿಯೋ ನೋಡಿ ಸ್ಪಿನ್ ಕಲಿತ ತನಿಯಾಮಾ.ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ 75ನೇ ವರ್ಷಾಚರಣೆ ಸಂದರ್ಭದಲ್ಲಿ ‘ಸ್ಪೋರ್ಟ್ 75’ ಹೆಸರಿನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗುತ್ತಿದೆ ಎಂದು ಲೇಖನದಲ್ಲಿ ತಿಳಿಸಲಾಗಿದೆ.
ಭಾರತದ ವಿರುದ್ಧದ ಪಂದ್ಯದ ನಂತರ ಜಪಾನ್ ತಂಡವು ಸೆಪ್ಟೆಂಬರ್ 19 ಮತ್ತು 20 ರಂದು ಇನ್ನೂ ಎರಡು ಟಿ20 ಪಂದ್ಯಗಳನ್ನು ಆಡಲಿದೆ, ನಂತರ ಅವರು ಏಷ್ಯನ್ ಕ್ರೀಡಾಕೂಟದ ಭಾಗವಾಗಿ ಸೆಪ್ಟೆಂಬರ್ 24 ರಂದು ಅಫ್ಘಾನಿಸ್ತಾನ ಮತ್ತು ಸೆಪ್ಟೆಂಬರ್ 26 ರಂದು ನೇಪಾಳವನ್ನು ಎದುರಿಸಲಿದೆ.
ಭಾರತದೊಂದಿಗಿನ ಐತಿಹಾಸಿಕ ಘರ್ಷಣೆಯು ಜಪಾನ್ ಕ್ರಿಕೆಟ್‌ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಮನ್ನಣೆಯನ್ನು ತರಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.