ವಿಜಯವಾಡದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಪಕುಲಪತಿ ಡಾ.ಪಿ.ಚಂದ್ರಶೇಖರ್ ಈ ವಿವರಗಳನ್ನು ಬಹಿರಂಗಪಡಿಸಿದರು. 1986ರ ನವೆಂಬರ್ 1ರಂದು ಆರಂಭವಾದ ಈ ವಿಶ್ವವಿದ್ಯಾನಿಲಯವು ದೇಶದ ವೈದ್ಯಕೀಯ ಕ್ಷೇತ್ರಕ್ಕೆ ಲಕ್ಷಾಂತರ ವೃತ್ತಿಪರರನ್ನು ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಂಯೋಜಿತ ಕಾಲೇಜುಗಳ ಬೋಧಕ ಸಿಬ್ಬಂದಿ ಭಾಗವಹಿಸಲಿದ್ದಾರೆ ಎಂದು ವಾರ್ಸಿಟಿ ರಿಜಿಸ್ಟ್ರಾರ್ ಡಾ.ಸಾಯಿ ಸುಧೀರ್ ತಿಳಿಸಿದ್ದಾರೆ.