ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ (ಜೆಪಿಎಲ್) ಪ್ರಸ್ತಾವಿತ ಮೆಗಾ ಐಪಿಒ ದೇಶೀಯ ಷೇರು ಮಾರುಕಟ್ಟೆಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಬರೆದಿದೆ. ಒಟ್ಟು 30,213 ಕೋಟಿ ಕ್ರೋಢೀಕರಣ ಗುರಿಯ ಭಾಗವಾಗಿ ಆರಂಭಿಸಲಾದ ಆಂಕರ್ ಬುಕ್ ಹಂಚಿಕೆಗೆ ಅಂತರಾಷ್ಟ್ರೀಯ ದೈತ್ಯ ಸಂಸ್ಥೆಗಳಿಂದ ಸುಮಾರು 2.5 ಲಕ್ಷ ಕೋಟಿ ಮೌಲ್ಯದ ಬಿಡ್ ಸ್ವೀಕರಿಸಲಾಗಿದೆ ಎಂದು ವರದಿಯಾಗಿದೆ. ಕ್ಯಾಪಿಟಲ್ ಗ್ರೂಪ್, ಫ್ರಾಂಕ್ಲಿನ್ ಟೆಂಪಲ್ಟನ್, ನಾರ್ವೆ ವೆಲ್ತ್ ಫಂಡ್ ಹಾಗೂ ಜಾಗತಿಕ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಪೈಪೋಟಿ ನಡೆಸುತ್ತಿದ್ದು, ದೇಶಿಯ ಮಾರುಕಟ್ಟೆಗಳಲ್ಲಿ ಹೊಸ ಉತ್ಸಾಹ ಮೂಡಿದೆ.
ಭಾರತೀಯ ಬಂಡವಾಳ ಮಾರುಕಟ್ಟೆಯ ಇತಿಹಾಸದಲ್ಲಿ ದಾಖಲೆ: ಜಿಯೋ ಐಪಿಒ ಆಂಕರ್ ಬುಕ್ಗಾಗಿ ರೂ 2.5 ಲಕ್ಷ ಕೋಟಿ ಬಿಡ್ಗಳು
ರಿಲಯನ್ಸ್ ಗ್ರೂಪ್ನ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಸಾರ್ವಜನಿಕ ವಿತರಣೆಯು ಜಾಗತಿಕ ಹೂಡಿಕೆದಾರರಿಂದ ಅಭೂತಪೂರ್ವ ಪ್ರತಿಕ್ರಿಯೆಯನ್ನು ಪಡೆದಿದೆ.
ಅಕ್ಷರ ಗಾತ್ರ
- 8,110 ಕೋಟಿ ರೂ.ಗಳ ಆಂಕರ್ ಬುಕ್ ಹಂಚಿಕೆಗೆ 30ಕ್ಕೂ ಹೆಚ್ಚು ಬಾರಿ ಬೇಡಿಕೆ ದಾಖಲಾಗಿದೆ. ಬ್ಲ್ಯಾಕ್ರಾಕ್, ಫಿಡೆಲಿಟಿ, ಜೆಪಿ ಮೋರ್ಗಾನ್, ಕತಾರ್ ಇನ್ವೆಸ್ಟ್ಮೆಂಟ್ ಅಥಾರಿಟಿ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಬಿಡ್ಗಳನ್ನು ಸಲ್ಲಿಸಿವೆ.






